ದಕ್ಷಿಣ ಕನ್ನಡ DAKSHINA KANNADA
ಜಿಲ್ಲೆಯ ಬಗ್ಗೆ
ಮಂಗಳೂರು ಕರ್ನಾಟಕದ ಒಂದು ಪ್ರಮುಖ ನಗರ. ಏಕೀಕರಣದ ನಂತರ ಮಂಗಳೂರು ನಗರವು ಎಲ್ಲಾ ಕ್ಷೇತ್ರಗಳಲ್ಲಿ ,ಅಂದರೆ ಶಿಕ್ಷಣ,ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ತ್ವರಿತ ಅಭಿವ್ರಧ್ಡಿ ಹೊಂದುತ್ತಿದೆ.ನಗರದಲ್ಲಿ ನೇತ್ರಾವತಿ ಮತ್ತು ಗುರುಪುರಗಳೆಂಬ ಎರಡು ನದಿಗಳು ಹರಿಯುತ್ತಿದ್ದು ,ಪೂರ್ವದಲ್ಲಿ ಪಶ್ಚಿಮ ಘಟ್ಟ ಹಾಗೂ ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಸುತ್ತುವರೆದಿದೆ. ನಗರದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಎನ್ ಎಚ್ 66 ಪನ್ವೇಲ್- ಕನ್ಯಾಕುಮಾರಿ , ಎನ್ ಎಚ್ 169 ಸೋಲಾಪುರ- ಮಂಗಳೂರು ,ಎನ್ಎಚ್48 ಮಂಗಳೂರು-ಬೆಂಗಳೂರು ಮುಂತಾದ ಪ್ರಮುಖ ನಗರವನ್ನು ಜೋಡಿಸುವ ಹೆದ್ದಾರಿಯಾಗಿದೆ. ನಗರವು ಬಜ್ಪೆಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವನ್ನು ಹೊಂದಿದ್ದು,ಇದು ನಗರದಿಂದ 15 ಕಿಮೀ ದೂರದಲ್ಲಿದೆ.
ಇತ್ತೀಚಿನ ಅಪ್ಡೇಟ್

KUMAR PARVATA[X]